Ephesians 2

ಮರಣದಿಂದ ಜೀವಕ್ಕೆ

1
2:1 ಕೊಲೊ. 1:21; 2:13:
ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.
2ಪೂರ್ವದಲ್ಲಿ
2:2 ಎಫೆ. 4:17,22; 5:8; ಕೊಲೊ. 3:7; 1 ಕೊರಿ. 6:7,8:
ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ,
2:2 ಎಫೆ. 6:12; ಯೋಹಾ. 12:13:
ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.
3ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು,
2:3 ಗಲಾ 5:16:
ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು.
2:3 ಕೀರ್ತ. 51:5; ರೋಮಾ. 5:12. 2 ಪೇತ್ರ 2:14:
ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

4ಆದರೆ
2:4 ಎಫೆ. 2:7; ತೀತ. 3:5:
ಕರುಣಾನಿಧಿಯಾಗಿರುವ ದೇವರು
2:4 ಯೋಹಾ 3 16:
ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,
5ಅಪರಾಧಗಳ ದೆಸೆಯಿಂದ
2:5 ಕೊಲೊ. 2:12,13; ಯೋಹಾ. 14:19:
ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು.
2:5 ಎಫೆ. 1 8; ಅ. ಕೃ. 15:11:
ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.
6ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ
2:6 ತೀತ. 3:4:
ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು
7ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ,
2:7 ಎಫೆ. 1:21:
ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ.

8
2:8 1 ಪೇತ್ರ. 1:5; ರೋಮಾ. 4:16:
ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.
2:8 2 ಕೊರಿ. 3:5:
ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ,
2:8 ಯೋಹಾ 4:10:
ಅದು ದೇವರ ದಾನವೇ.
9
2:9 2 ತಿಮೊ. 1:9; ತೀತ. 3:5; ರೋಮಾ. 3:20,28:
ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ,
2:9 1 ಕೊರಿ. 1:29:
ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.
10
2:10 ಕೀರ್ತ. 100. 3; ಯೆಶಾ. 64:8:
ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ,
2:10 ಎಫೆ. 1:4:
ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ
2:10 ಎಫೆ. 4:24; ತೀತ. 2:14:
ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಕ್ರಿಸ್ತನಲ್ಲಿ ಒಂದೇ ಜನಾಂಗ

(ಕೊಲೊ. 1:21-29)

11ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ
2:11 ರೋಮಾ. 2:28,29; ಕೊಲೊ. 2:11,13:
ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.
12ಅಂದು
2:12 ಎಫೆ. 5:8:
ನೀವು ಕ್ರಿಸ್ತನಿಂದ ದೂರವಿದವರೂ,
2:12 ಕೊಲೊ. 1:21; ಗಲಾ. 2:15:
ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ,
2:12 ರೋಮಾ. 9:4:
ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು
2:12 1 ಥೆಸ. 4:13:
ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

13ಈಗಲಾದರೋ,
2:13 ಎಫೆ. 2:17; ಅ. ಕೃ. 2:39:
ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ
2:13 ಕೊಲೊ. 1:20:
ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.
14
2:14 ಗಲಾ. 3:28:
ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ
2:14 ಮೀಕ. 5:5; ಕೊಲೊ. 3:15:
ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು
2:14 ಕೊಲೊ. 1:21,22:
ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.
15ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ
2:15 ರೋಮಾ. 6:4:
ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.
16ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ
2:16 ಅಥವಾ, ಪರಿಹರಿಸಿ.
ಇಲ್ಲವಾಗಿಸಿ,
2:16 ಕೊಲೊ. 1:20-22:
ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.

17ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 18ಇದರಿಂದ
2:18 ಯೋಹಾ. 14:6
ಆತನ ಮೂಲಕ ಉಭಯತ್ರರು
2:18 ಎಫೆ. 4:4; 1 ಕೊರಿ. 12:13 ಯೋಹಾ 4:23:
ಒಂದೇ ಆತ್ಮನಲ್ಲಿ
2:18 ಎಫೆ. 3:12; ರೋಮಾ. 5:2; ಯೋಹಾ. 10:7,9
ತಂದೆಯ ಬಳಿಗೆ
2:18 ತಂದೆಯೊಟ್ಟಿಗೆ ಮಾತನಾಡಲು ಅಥವಾ ತಂದೆಯ ಪ್ರಸ್ನತೆಯಲ್ಲಿ ಸೇರಲು ಅಧಿಕಾರ ದೊರೆಯಿತು.
ಪ್ರವೇಶಿಸಲು ಮಾರ್ಗವಾಯಿತು.

19ಹೀಗಿರಲಾಗಿ ನೀವು ಇನ್ನು ಮೇಲೆ
2:19 ಎಫೆ. 2:12; ಇಬ್ರಿ. 11:13, 13:14:
ಪರದೇಶದವರೂ ಅನ್ಯರೂ ಆಗಿರದೇ
2:19 ಫಿಲಿ. 3:20; ಇಬ್ರಿ. 12:22,23:
ದೇವಜನರೊಂದಿಗೆ ಒಂದೇ ಸಂಸ್ಥಾನದವರೂ
2:19 ಗಲಾ. 6:10
ದೇವರ ಮನೆಯವರೂ ಆಗಿದ್ದೀರಿ.
20
2:20 ಮತ್ತಾ 16:18; ಪ್ರಕ. 21:14:
ಅಪೊಸ್ತಲರೂ
2:20 ಎಫೆ. 3:5; 4:11:
ಪ್ರವಾದಿಗಳೂ ಎಂಬ
2:20 ಅಥವಾ ಹಾಕಿದ.
ಅಡಿಪಾಯದ ಮೇಲೆ
2:20 1 ಕೊರಿ. 3:9:
ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ.
2:21 1 ಕೊರಿ. 3:11:
ಯೇಸು ಕ್ರಿಸ್ತನೇ
2:21 ಕೀರ್ತ. 118:22; ಯೆಶಾ. 28:16:
ಮುಖ್ಯವಾದ ಮೂಲೆಗಲ್ಲು.
21
2:21 ಎಫೆ. 4:15,16:
ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ದಿಯಾಗುತ್ತಾ ಕರ್ತನಲ್ಲಿ
2:21 1 ಕೊರಿ. 3:16,17:
ಪರಿಶುದ್ಧ ದೇವಾಲಯವಾಗುತ್ತದೆ.
2:22 1 ಪೇತ್ರ. 2:5:
ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ
2:22 2 ಕೊರಿ. 6:16:
ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

22

Copyright information for KanULB